ಶ್ರೀ ಶಂಕರಾಚಾರ್ಯರ ಜಯಂತಿ (17-05-2021)
ಇಂದು ವೈಶಾಖ ಮಾಸ ಶುಕ್ಲ ಪಕ್ಷ ಪಂಚಮಿ. ಸಾಕ್ಷಾತ್ ಶಿವನ ಅವತಾರವೇ ಆದ ಶ್ರೀ ಶಂಕರಾಚಾರ್ಯರು ಜನಿಸಿದ ದಿನ .ಇವರ ಕಾಲವು ನಿರ್ದಿಷ್ಟವಾಗಿ ತಿಳಿಯದಿದ್ದರೂ ಸಾಂಪ್ರದಾಯಿಕವಾಗಿ ಶ್ರೀ ಆಚಾರ್ಯರ ಹುಟ್ಟು ಹಬ್ಬವನ್ನು ವೈಶಾಖ ಶುದ್ಧ ಪಂಚಮಿಯಂದೇ ಎಂದು ಗುರುತಿಸಿ ಆಚರಿಸಲಾಗುತ್ತಿದೆ.ಇವರು ಕ್ರಿ.ಶ. 688 -720 ರ ಅವಧಿಯಲ್ಲಿ ಸುಮಾರು 32 ಕಾಲ ಜೀವಿಸಿದ್ದರೆಂದೂ .ಕೇರಳದ ಪೂರ್ಣ ನದಿಯ ಬಳಿ ಇರುವ ಕಾಲಾಡಿ ಎಂಬಲ್ಲಿ ನಂಬೂದ್ರಿ ಬ್ರಾಹ್ಮಣ ವರ್ಗದ ಕೃಷ್ಣ - ಯಜುರ್ವೇದ ಶಾಖೆಯ ಅತ್ರಿ ಗೋತ್ರೋದ್ಭವರಾದ ಶಿವಗುರು-ಸತಿದೇವಿ ಎಂಬ ದಂಪತಿಗಳಿಗೆ ಜನಿಸಿದರೆಂದೂ ಹೇಳಲಾಗಿದೆ.ಇವರು, ಗೋವಿಂದ ಭಾಗವದ್ಪಾರ ಶಿಶ್ಯರಾಗಿ ಅನೇಕ ಶಾಸ್ತ್ರಗಳ ಅಧ್ಯಯನ ನಡೆಸಿ, ಅದ್ವಿತೀಯವಾದ ಪಾಂಡಿತ್ಯವನ್ನು ಗಳಿಸುತ್ತಾರೆ.ಅಂದಿನ ಕಾಲದಲ್ಲಿ ಭೌದ್ದ ಧರ್ಮವು ಅತಿ ಪ್ರಭಲವಾಗಿ ಭಾರತದ ಎಲ್ಲೆಡೆ ಹರಡುತ್ತಿದ್ದು, ಹಿಂದೂ ಧರ್ಮವು ಅವನತಿಯ ಹಂತದಲ್ಲಿರುವಾಗ ಅದರ ಪುನರ್ ಸ್ಥಾಪನೆಯ ಚಿಂತೆಯೇ ಅವರದಾಯಿತು.ಹಿಂದೂ ಧರ್ಮ ಮತ್ತು ಭೌದ್ದ ಧರ್ಮದ ವ್ಯತ್ಯಾಸವನ್ನು ಅವರು ವಿವರಿಸಿದರು ಪ್ರಸ್ಥಾನ ತ್ರಯಗಳೆನಿಸುವ ಬ್ರಹ್ಮ ಸೂತ್ರ, ಉಪನಿಷದ್ ಮತ್ತು ಭಗವದ್ಗೀತೆ ಗಳಿಗೆ ವ್ಯಾಖ್ಯಾನಗಳನ್ನು ಬರೆದವರಲ್ಲಿ ಮೊದಲಿಗರು. ಲೌಕಿಕರ ದೃಷ್ಟಿಯಲ್ಲಿ ಈ ಪ್ರಸ್ಥಾನ ತ್ರಯಗಳು ಕಬ್ಬಿಣದ ಕಡಲೆಯೆಂದೇ ಭಾವಿಸಿದ್ದವರಿಗೆ ಈ ವ್ಯಾಖ್ಯಾನಗಳು ದೊರೆತುದು ಅವರ ಪುಣ್ಯವೆಂದೇ ಬಗೆಯಬೇಕು. ನಮ್ಮ ಈ ಬದುಕು ಕ್ಷಣಿಕ ಅದು ಮಾಯೆ ಬ್ರಹ್ಮವೊಂದೇ ಶಾಶ್ವತ,-ನಿತ್ಯ ಈ ಜ್ಞಾನ ನಮ್ಮಲ್ಲಿ ಮೂಡಬೇಕಾದರೆ,ಮೋಹಿನಿ-ಕಾಂಚಾಣಗಳ ಮೇಲಿನ ಮೋಹವನ್ನು ತ್ಯಜಿಸಬೇಕು.ಸನ್ಯಾಸ ವೇಷದ ನಾಟಕದಿಂದ ಮನುಷ್ಯನು ಯಾವ ಗುರಿಯನ್ನು ಮುಟ್ಟುವುದಿಲ್ಲ ಬ್ರಹ್ಮ ತತ್ವದ ಅರಿವು ಮಾಡಬೇಕಾದರೆ ಆತ್ಮಜ್ಞಾನದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿರುತ್ತಾರೆ.ಈ ರೀತಿಯಾದ ಆಧ್ಯಾತ್ಮಿಕ ಜ್ಞಾನವನ್ನು ಸಾಮಾನ್ಯ ಜನರು ಪಡೆಯಲೆಂದೇ ಶ್ರೀ ಶಂಕರಾಚಾರ್ಯರು ೩೧ ಶ್ಲೋಕಗಳ ಭಜ ಗೋವಿಂದಂ ಎಂಬ ಕೀರ್ತನೆಯನ್ನು ರಚಿಸಿರುತ್ತಾರೆ. ಮೊದಲ ಹನ್ನೆರಡು ಕೀರ್ತನೆಗಳನ್ನು ಶ್ರೀ ಶಂಕರರು, ಮತ್ತು ಉಳಿದ ಕೀರ್ತನೆಗಳನ್ನು ಅವರ ಅನುಯಾಯಿಗಳು ರಚಿಸಿದರೆಂದು ಹೇಳಲಾಗಿದೆ.ಈ ಕೀರ್ತನೆಯು ಗೋವಿಂದನನ್ನು ಕುರಿತಾಗಲಿ ಅಥವಾ ಬೇರೆ ದೇವರುಗಳನ್ನು ಕುರಿತಾಗಲಿ ಬರೆದಿರುವುದಿಲ್ಲ.,ಯಾವ ಲೌಕಿಕ ಸಿರಿಯು ಅಂತ್ಯಕಾಲದಲ್ಲಿ ರಕ್ಷಣೆಗೆ ಬರುವುದಿಲ್ಲವೆಂದೂ ಎಲ್ಲರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾದ ಗೋವಿಂದನೊಬ್ಬನೇ ಎಂದೂ, ಅವನನ್ನು ಸ್ತುತಿಸದವರು ಮೂಢರೆಂದು ಜರಿದಿರುವರು.ಆದ್ದರಿಂದ ಪರಮಾತ್ಮನನ್ನು ಜಪಿಸಬೇಕೆಂದು ಮತ್ತು ಮನುಷ್ಯರಲ್ಲಿ ತುಂಬಿರುವ ದುರ್ಗುಣಗಳ ಬಗ್ಗೆ ವಿಶ್ಲೇಸಿರುತ್ತಾರೆ ಇವರ ಜೀವನದ ಸಂಧ್ಯಾಸಮಯದಲ್ಲಿ ರಚಿತವಾದ "ಬಜ ಗೋವಿಂದಂ" ಕೀರ್ತನೆಯು ನಮ್ಮ ಅಂತರಂಗಕ್ಕೆ ಕರೆದೊಯ್ಯುವ ಪ್ರವೇಶ ದ್ವಾರ.ನಾನು ಯಾರು,ನನ್ನ ತಾಯಿ ಯಾರು ?ತಂದೆ ಯಾರು ಎಂದು ವಿಚಾರ ಮಾಡುತ್ತಾ ಹೋದ ಹಾಗೆಲ್ಲ ಹೊರಗಿನ ಶರೀರದ ಆಸೆ ಆಕಾಕ್ಷೆಗಳು ಕಡಿಮೆಯಾಗುತ್ತಾ ಹೋಗಿ ನಮ್ಮ ಒಳ ಕಣ್ಣನ್ನು ತೆರೆಸಿ ಪ್ರಪಂಚದ ನಶ್ವರತೆ, ಕ್ಷಣಿಕತೆ, ನಿಚ್ಚಳವಾಗುತ್ತಾ ಹೋಗಿ ,ಬ್ರಹ್ಮ ಬೇರೆಯಲ್ಲ ನಾನು ಬೇರೆಯಲ್ಲ ನಾನೇ ಬ್ರಹ್ಮ . 'ಅಹಂ ಬ್ರಹ್ಮಾಸ್ಮಿ' ಎಂದು ಮನಸ್ಸಿಗೆ ಸತ್ಯಗೋಚರವಾಗುತ್ತದೆ ಎಂದು ಅಂದಿನ ಶ್ರೀ ರಾಜಾಜಿಯವರು ಹೇಳಿರುವುದು ನೆನೆಪಿಸಿಕೊಳ್ಳಬಹುದು. ಬಜ ಗೋವಿಂದಂ ಕೀರ್ತನೆಯನ್ನು ಸಂಗೀತ ವಿದೂಷಿಯಾದ ಶ್ರೀಮತಿ ಎಂ ಏಸ್ ಸುಬ್ಬಲಕ್ಷ್ಮಿಯವರು ತಮ್ಮ ಸುಶ್ರಾವ್ಯ ಕಂಠ ಮಾಧುರ್ಯದಿಂದ ದೇಶ ವಿದೇಶಗಳಲ್ಲಿ ಹಾಡಿ ಜನಪ್ರಿಯಗೊಳಿಸಿರುತ್ತಾರೆ. ಶ್ರೀ ರಾಮ ಕೃಷ್ಣ ಆಶ್ರಮದ ಧರ್ಮ ಗುರುಗಳು, ಆಧ್ಯಾತ್ಮಕ ಚಿಂತಕರು,ಧ್ಯಾನ ಯೋಗಿಗಳು ಮತ್ತು ಯತಿವರೇಣ್ಯರೂ ಸಹಾ ತಮ್ಮ ಪ್ರವಚನಗಳಲ್ಲಿ "ಭಜ ಗೋವಿಂದಂ"ವಿಷಯವಾಗಿ ತಮ್ಮ ಕಾರ್ಯ ಕ್ರಮಗಳಲ್ಲಿ ಒಂದು ಅವಿಭಾಜ್ಯ ಅಂಗವೆಂದು ಈ ಕೀರ್ತನೆಯನ್ನೂ ವಿವರಿಸಲು ಹಮ್ಮಿಕೊಂಡಿರುತ್ತಾರೆ.
ಶ್ರೀ ಶಂಕರಾಚಾರ್ಯರು ಪಂಡಿತ - ಪಾಮರರಿಗೂ ಸಹಾ ಅರ್ಥವಾಗುವಂತಹ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು. ಇವರು ಕೃತಿಗಳೆಂದರೆ ಒಂದು ಸಾಗರವಿದ್ದಂತೆ ಅವರಿಗೆ ಸಾಕೆನಿಸುವಷ್ಟು ಮತ್ತು ತೃಷೆ ನೀಗಿಸಿಕೊಳ್ಳುವಷ್ಟು ಜಲವನ್ನು ಈ ಜ್ಞಾನ ಸಾಗರದಿಂದ ಕೊಂಡೊಯ್ಯಬಹುದಾಗಿರುತ್ತದೆ.ಇವರ ಕೃತಿಗಳಲ್ಲಿ ಆಳಕ್ಕೆ ಇಳಿದಷ್ಟೂ ಅತ್ಯಮುಲ್ಯವಾದ ಜ್ಞಾನವೆಂಬ ಮುತ್ತು ರತ್ನಗಳು ದೊರೆಯುತ್ತದೆ. ಇವರು ಜ್ಞಾನ ಸಂಪತ್ತು ಪಡೆದ ಶ್ರೀ ಶಂಕರರು ಯೋಗಿವರ್ಯರಾಗಿದ್ದು, ವೇದಾಂತ ಜ್ಞಾನಕ್ಕೆ ಅರ್ಹರಾಗಿ ಜೀವನ್ಮುಕ್ತಿ ಪಡೆದರು. ಭೌದ್ದ ಧರ್ಮವು ಭಾರತದಲ್ಲಿ ಬಹು ಬೇಗ ತನ್ನ ಪ್ರಭಾವವನ್ನು ಮೂಲೆಮೂಲೆಯಲ್ಲಿ ಹರಡುತ್ತಿದ್ದುದರಿಂದ,ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಹರಡುವ ಉದ್ದೇಶದಿಂದಲೇ ಭಾರತದಲ್ಲಿ ಧ್ಯಾನ ಪೀಠಗಳನ್ನು ರಚಿಸಿದರು.ಭಾರತದ ದಕ್ಷಿಣ ದಿಕ್ಕಿನಲ್ಲಿ ಶೃಂಗೇರಿಯಲ್ಲೂ , (ಕರ್ನಾಟಕ್) ಪೂರ್ವ ದಿಕ್ಕಿನಲ್ಲಿ ಪೂರಿಯಲ್ಲಿಯೂ(ಒಡಿಶಾ) ಪಶ್ಚಿಮ ದಿಕ್ಕಿನಲ್ಲಿ ದ್ವಾರಕೆಯಲ್ಲಿಯೂ( ಉತ್ತರ ಪ್ರದೇಶ ) ಮತ್ತು ಉತ್ತರದಿಕ್ಕಿನಲ್ಲಿ ಬದರಿನಾಥ್ ನಲ್ಲೂ (ಉತ್ತರ ಖಾಂಡ ) ರಚಿಸಿ ಹಿಂದೂ ಧರ್ಮವನ್ನು ಹರಡುವುದೇ ಮೂಲ ಉದ್ದೇಶವಾಗಿ ಮಾಡಿಕೊಂಡರು. ಒಂದೊಂದು ಧಾರ್ಮ ಪೀಠಕ್ಕೆ ಅರ್ಹರಾದ ಯೋಗಿ ವರ್ಯರನ್ನು ನೇಮಿಸಿ,ತಮ್ಮ ಸರಳ ಭಾಷ್ಯಗಳನ್ನು ಜನರಿಗೆ ಮನಮುಟ್ಟುವಂತೆ ಭೋದಿಸಿ ಅವನತಿಯ ಅಂಚಿನಲ್ಲಿದ್ದ ಹಿಂದೂ ಧರ್ಮದ ಪುನರ್ ಪ್ರತಿಷ್ಠಾಪನೆಗೆ ಭದ್ರವಾದ ಭುನಾದಿ ಹಾಕಿದರು.ಶ್ರೀ ಶಂಕರಾಚಾರ್ಯರು ತಮ್ಮ ಅಲ್ಪ ಆಯುಷ್ಯದಲ್ಲಿ ಸಾಧನೆ ಮಾಡಿದಷ್ಟು ಮತ್ತಾರೂ ಮಾಡಿಲ್ಲವೆಂದೇ ಹೇಳಬೇಕು. ಅವರು ತಮ್ಮ ಜೀವನದ ಅಂತಿಮ ಪ್ರಯಾಣವನ್ನು ಭಾದರೀನಾಥ್ನಲ್ಲಿ ಮುಗಿಸಿದರೆಂದು ಹೇಳಲಾಗಿದೆ. ಅವರ ಜಯಂತಿಯ ಸಂದರ್ಭದಲ್ಲಿ ಇಂತಹ ಜಗದ್ಗುರುಗಳ ಪಾದ ಕಮಲಗಳಿಗೆ ನಮಸ್ಕರಿಸುತ್ತಾ , ಅವರ ಆಶೀರ್ವಾದ ಯಾವಾಗಲೂ ನಮ್ಮೆಲ್ಲರ ಮೇಲಿರಲೆಂದು ಹಾರೈಕೆ ಮಾಡುತ್ತಾ ದೇಶಕ್ಕೆ ಅಂಟಿರುವ ಕೋರೋನ ಸೋಂಕನ್ನು ಹೊಡೆದೋಡಿಸುವಂತೆ ಮತ್ತು ಎಲ್ಲರಿಗೂ ಅರೋಗ್ಯ ಭಾಗ್ಯವನ್ನು ನೀಡಲೆಂದು ಸಾಮುಹಿಕವಾಗಿ ಭಜಿಸೋಣ "ಭಜ ಗೋವಿಂದಂ -ಭಜ ಗೋವಿಂದಂ"
🙏🙏🙏🙏🙏
No comments:
Post a Comment