ಮಂಗಳೂರು ಲಕ ಸುದ್ದಿ: ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಪಾಜೆಗುಡ್ಡೆಯಲ್ಲಿರುವ "ಕೋಟಿ ಚೆನ್ನಯರ ಪವಿತ್ರ ತೀರ್ಥ ಸ್ಥಳ"ವನ್ನು ಶುಚಿಗೊಳಿಸಿದ ಮೂಡಿಗೆರೆಯ ತಂಡ..
ಮೂಡಿಗೆರೆಯ ಶಿವಗಿರಿ ಸೇವಕರು ತಂಡದ ಮುಖ್ಯಸ್ಥ ಪ್ರವೀಣ್ ಪೂಜಾರಿ ಹಾಗೂ ತಂಡದಿಂದ ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಪಾಜೆಗುಡ್ಡೆ ಎಂಬಲ್ಲಿ ತುಳುನಾಡಿನ ಕಾರಣಿಕ "ಅವಳಿ ವೀರರಾದ 'ಕೋಟಿ ಚೆನ್ನಯ'ರು ತಮ್ಮ ಅಯುಧ (ತುಳುವಿನಲ್ಲಿ ಸುರಿಯ ಎನ್ನುತ್ತಾರೆ) ನೆಲಕ್ಕೂರಿದ ಜಾಗವಾದ ಪವಿತ್ರ ತೀರ್ಥ ಸ್ಥಳ"ವು
ಪೊದೆಗಳಿಂದ ಭಾಗಶಃ ಮುಚ್ಚಿದ್ದು ಈ ಪರಿಸರವನ್ನು ಸುಚಿಗೊಳಿಸುವ ಕಾರ್ಯ ಮಾಡಿದ್ದಾರೆ..
ಉಡುಪಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಈ ದಿನ ಮೂಡಿಗೆರೆಯ "ಪ್ರವೀಣ್ ಪೂಜಾರಿ" ಹಾಗೂ ಅವರ ಸ್ನೇಹಿತರಾದ ಮಂಜುನಾಥ್ ಹಾಂದಿ, ರಾಘು, ಶ್ರೀಕಾಂತ್ ಪೂಜಾರಿ, ರಫೀಕ್ ಹಾಂದಿ, ಬಂದಿದ್ದರು.. ಇವರು ನಾರವಿಯ 'ಕೋಟ್ಯಾನ್ ಚಿಕನ್ ಸೆಂಟರ್' ಇದರ ಮಾಲಕರಾದ ರಮೇಶ್ ಕೋಟ್ಯಾನ್ ಹಾಗೂ ಸುಧಾಕರ್ M.K ನಾರವಿ ಇವರುಗಳ ಸಹಕಾರದಲ್ಲಿ ಸಂಜೆಯ ಹೊತ್ತು ಈ ಪರಿಸರವನ್ನು ಶುಚಿ ಗೊಳಿಸುವಲ್ಲಿ ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ..
ಇವರ ಈ ನಿಸ್ವಾರ್ಥ ಸೇವೆಗೆ ನಮ್ಮೆಲ್ಲರ ಶುಭಹಾರೈಕೆ ಇರಲಿ..
✒️ RajPavi Billava
No comments:
Post a Comment