12 Jul 2020

ಅಸಹಾಯಕ ವೃದ್ದ ದಂಪತಿಗಳಿಗೆ ಸೂರು -ಶ್ರಮದಾನದ ಮೂಲಕ ಕೈ ಜೋಡಿಸಿದ - ಬಿರುವೆರ್ ಕುಡ್ಲ (ರಿ) ಬೆದ್ರ ಘಟಕ

*ಅಸಹಾಯಕ ವೃದ್ಧ ದಂಪತಿಗಳಿಗೆ ಸೂರು ನಿರ್ಮಿಸುವ ಕಾರ್ಯದಲ್ಲಿ ಶ್ರಮದಾನದ ಮೂಲಕ ಕೈ ಜೋಡಿಸಿದ "ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ"..*
12-07-2020
*ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವೃದ್ಧ ದಂಪತಿಗಳಾದ ಸುಶೀಲ -ದೂಜ ಪೂಜಾರಿಯವರ ಹೊಸ ಮನೆಯ ಕಾಮಗಾರಿಯು ಮೂಡಬಿದ್ರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಜೆ ಶೆಟ್ಟಿಗಾರ್ ರವರ ಮುಂದಾಳತ್ವದಲ್ಲಿ, ಅನೇಕ ಸಂಘ ಸಂಸ್ಥೆಗಳ ಹಾಗೂ ದಾನಿಗಳ ನೆರವಿನಿಂದ ಹೊಸದಾದ ಮನೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಈ ಕಾರ್ಯದಲ್ಲಿ "ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ"ವು ಈ ದಿನ ಶ್ರಮದಾನ ಮಾಡುವ ಮೂಲಕ ವೃದ್ಧ ದಂಪತಿಗಳ ಆಸರೆಗಾಗಿ ಕೈ ಜೋಡಿಸಿದೆ..*
*ಈ ದಿನ ನಮ್ಮ ಘಟಕದ 12 ಸದಸ್ಯರನ್ನೊಳಗೊಂಡ ತಂಡವು ಮನೆಯ ಸೌಚಾಲಯದ ಗುಂಡಿ, ಮನೆಯ ಸುತ್ತ ನೆಲ ಸಮತಟ್ಟು, ಹಾಗೂ ಇನ್ನಿತರ ಕೆಲಸ ಮಾಡುವ ಮೂಲಕ ನಿರೀಕ್ಷೆಗಿಂತಲು ಹೆಚ್ಚಿನ ಕೆಲಸವನ್ನು ಮಾಡಿ ವೃದ್ಧ ದಂಪತಿಗಳ ಅಸಹಾಯಕ ಸ್ಥಿತಿಗೆ ಸಣ್ಣ ಮಟ್ಟದಲ್ಲಿ ನೆರವಾಗಿದ್ದೇವೆ..*

*ಈ ಶ್ರಮದಾನದಲ್ಲಿ ಪಾಲ್ಗೊಂಡು ತಮ್ಮ ಹೆಚ್ಚಿನ ಶ್ರಮವನ್ನು ಸೂರು ನಿರ್ಮಿಸುವ ಈ ಕಾರ್ಯದಲ್ಲಿ ಮೀಸಲಾಗಿಸಿದ ನಮ್ಮ ಘಟಕದ ಹೆಮ್ಮೆಯ ಸದಸ್ಯರುಗಳೆಲ್ಲರಿಗೂ ಮನದಾಳದ ಕೃತಜ್ಞತೆಗಳು..*
🙏🏻🙏🏻🙏🏻🙏🏻
*ರಾಜ್ ಪವಿ ಬಿಲ್ಲವ*
*ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ*

No comments:

Post a Comment