#PrajnaPoojary
#ಅಭಿನಯ ಕಲಾವಿದರು
ಬಿಲ್ಲವ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಗುವಂತಹ ಯುವ ಪ್ರತಿಭೆ #ಪ್ರಜ್ಞಾ ಪೂಜಾರಿ ಉಡುಪಿ
ಬಿಲ್ಲವ ಸಮಾಜದ ಪ್ರತಿಭೆಗಳೆಂದರೆ ಅಕ್ಷಯ ಪಾತ್ರೆಯಿದ್ದಂತೆ ತೆಗೆದಷ್ಟು ಕಾಲಿಯಾಗದ್ದು ಅಂತೇಯೇ ನಮ್ಮ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಕ್ಕಿದ್ದು ಪ್ರಜ್ಞಾ ಪೂಜಾರಿ ಉಡುಪಿಯ ಕುರ್ಕಾಲ್ ನವರಾದ ಇವರು ಆಟೋಟ ಮಾತ್ರವಲ್ಲದೆ ಅಭಿನಯ ರಂಗದಲ್ಲೂ ಸೈ ಎನಿಸಿಕೊಂಡವರು. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದು ಶಂಕರಪುರದಲ್ಲಿ ಡಿಪ್ಲೊಮಾವನ್ನು ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಮಣಿಪಾಲದಲ್ಲಿ ಪೂರ್ಣಗೊಳಿಸಿದರು.
ಬಾಲ್ಯದಲ್ಲಿಯೇ ನೃತ್ಯದಲ್ಲಿ ಆಸಕ್ತಿ ಹೊಂದಿದ ಇವರು ಅನೇಕ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.ವಾಲ್ಲಿಬಾಲ್ ಹಾಗೂ ಥ್ರೋ ಬಾಲ್ ಆಟಗಾರ್ತಿ ಯಾದ ಇವರು ಚಿಕ್ಕಬಳ್ಳಾಪುರದಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯ ಇಂಟೆರ್ ಕಾಲೇಜು ಸ್ಪೋರ್ಟ್ಸ್ ಮೀಟಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ.
ಉಡುಪಿಯ ಪ್ರಸಿದ್ಧ ನಾಟಕ ತಂಡವಾದ ಅಭಿನಯ ಕಲಾವಿದರು ತಂಡದಲ್ಲಿ ಕಲಾವಿದೆಯಾಗಿರುವ ಇವರು ಸ್ನೇಹ ಧರೆ ಎಂಬ ಕಿರುಚಿತ್ರದಲ್ಲಿ ಕೂಡ ನಟಿಸಿದ್ದಾರೆ.
ಸಂಭ್ರಮ ಫೆಸ್ತ್ ೨೦೧೮ ಕಿರುಚಿತ್ರ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಕಾಮಿಡಿ ಫೀಮೇಲ್ ಆಕ್ಟ್ರೆಸ್ಸ್ ಅವಾರ್ಡ್ ಕೂಡ ಪಡೆದಿರುತ್ತಾರೆ. ಇನ್ನೂ ಹೆಚ್ಚಿನ್ನ ಸಾಧನೆಗಳು ಇವರಿಂದ ಆಗಲಿ ಪ್ರತಿ ಹೆಜ್ಜೆಯಲ್ಲೂ ಯಶಸ್ವಿಯಾಗಿ ಮುನ್ನಡೆಯಲಿ ಇವರ ಸಾಧನೆಗಳಿಗೆ ನಮ್ಮ ಕಡೆಯಿಂದ ತುಂಬುಹೃದಯದ ಅಭಿನಂದನೆಗಳು.
ಕೃಪೆ : ಕೋಟಿ ಚೆನ್ನಯ FB page
No comments:
Post a Comment