2 Mar 2020

ಗೆಜ್ಜೆಗಿರಿ ಆಡಳಿತ ಸಮಿತಿಗೊಂದು- ಕೃತಜ್ಞತೆಯ ಸಂದೇಶ


*ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ*  ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ಗೋಕರ್ಣನಾಥೇಶ್ವರ ದೇವರ ಆಶೀರ್ವಾದ ಹಾಗೂ  ಮಾತೆ ದೇಯಿ ಬೈದ್ಯೆತಿ ಹಾಗೂ ಅವಳಿ ವೀರರಾದ ಕೋಟಿ ಚೆನ್ನಯರ ಕೃಪಾ ಕಟಾಕ್ಷದಿಂದ ಧಾರ್ಮಿಕ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿರುವುದು ಸಂತಸದ ಸಂಗತಿ . 
ಈ ಯಶಸ್ಸಿನ ರೂವಾರಿಗಳಾದ ಕ್ಷೇತ್ರಾಡಳಿತ ಸಮಿತಿ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಗೆ ಹೃದಯಸ್ಪರ್ಶಿ  ಅಭಿನಂದನೆಗಳು 💐💐💐

ಈ ಪುಣ್ಯಭೂಮಿಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬಂದ ಅಪಾರ ಜನಸ್ತೋಮವನ್ನು ಕಂಡಾಗ ನಮ್ಮ ಸಮಾಜ ಬಾಂಧವರು ಒಂದೇ ಸೂರಿನಡಿಯಲ್ಲಿ  ಒಂದಾಗುವ ಆಶಾಕಿರಣವೊಂದು ಮೂಡಿದಂತಾಗಿದೆ. ಆದರೆ ಈ ಅಮೋಘ ಯಶಸ್ಸಿನ ಮಹಾಯಜ್ಞದ ಹಿಂದೆ ನಮ್ಮ ಸಮಾಜದ  ಪ್ರತಿಯೊಬ್ಬ ಸದಸ್ಯನ ಹಲವಾರು ಸಮಯದ ನಿರಂತರ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದ ಸೇವೆ ಹುದುಗಿದೆ ಎಂಬುವುದನ್ನು     ನಾವು ವಿನಮ್ರತೆಯಿಂದ ಸದಾ ಸ್ಮರಿಸಬೇಕಿದೆ.
   ಈ ಸಲುವಾಗಿ ಆಡಳಿತ ಮಂಡಳಿ ಹಾಗೂ ನಮ್ಮ ಸಮಾಜದ  ಪ್ರತಿಯೊಬ್ಬ ನಾಯಕರ ಜವಾಬ್ದಾರಿಯೂ ಇನ್ನಷ್ಟು ಅಧಿಕಗೊಂಡಿದ್ದು  ನಮ್ಮ ಸಮಾಜ ಬಾಂಧವರು ಇಟ್ಟುಕೊಂಡ ಅಪಾರ ನಿರೀಕ್ಷೆ,, ಭರವಸೆಗಳಿಗೆ  ಯಾವುದೇ ಧಕ್ಕೆಯಾಗದಂತೆ ಅವರಿಗೆ ನಿರಾಶೆಯಾಗದ ರೀತಿಯಲ್ಲಿ ನಿಸ್ವಾರ್ಥಕತೆಯಿಂದ ಸಮಾಜವನ್ನು  ಮುನ್ನಡೆಸುವ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ವಿನಮ್ರತೆಯಿಂದ ತಿಳಿಯಬಯಸುತ್ತಾ  ಇದಕ್ಕೆ ಪೂರಕವಾದ ಕೆಲಸ ಕಾರ್ಯಗಳು ನಿರಂತರ ನಡೆಯಲಿ ಹಾಗೂ ಗೆಜ್ಜೆಗಿರಿಯಲ್ಲಿ ಮುನ್ನುಡಿ ಬರೆದ ನಮ್ಮ ಸಮಾಜದ ಒಗ್ಗಟ್ಟು ಭವಿಷ್ಯದಲ್ಲಿ ನಮ್ಮ ಸಮಾಜದ ನೇತೃತ್ವದಲ್ಲಿ  ನಡೆಯುವ ಎಲ್ಲಾ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕಾರ್ಯಕರ್ಮದಲ್ಲಿಯೂ ನಿತ್ಯ ನಿರಂತರ ಬೆಳಗುವಂತಾಗಲಿ ಎಂಬುದೇ ನನ್ನ ಹಾರೈಕೆ

ಪದ್ಮರಾಜ್ ಆರ್ 
ಕೋಶಾಧಿಕಾರಿ
ಕ್ಷೇತ್ರಾಡಳಿತ ಸಮಿತಿ 
ಶ್ರೀ ಗೋಕರ್ಣನಾಥ ಕ್ಷೇತ್ರ

No comments:

Post a Comment