ಮಂಗಳೂರು:ಇಂದು ಬಂಟ್ವಾಳ ತಾಲೂಕಿನ ಬಡಗ ಕಜೆಕಾರಿನಲ್ಲಿ
ಶ್ರೀಮಹಾದೇವ ದೇವರ ಸನ್ನಿಧಿಯಲ್ಲಿ
" ಗ್ರಾಮ ಪಂಚಾಯಿತ್ ಸದಸ್ಯರಾದ "ಕಜೆಕಾರು ಗಂಗಾಧರ ಪೂಜಾರಿ ಪೂಜಾರಿ"ಯವರ ನೇತೃತ್ವದಲ್ಲಿ ನಡೆದ ಬಡಕುಟುಂಬದ ಹೆಣ್ಣು ಮಗಳ ಮದುವೆಗೆ ಧನಸಹಾಯ ನೀಡುವ ಕಾರ್ಯಕ್ರಮ
"ಸೌಭಾಗ್ಯ ಸಂಭ್ರಮ"
ಕಾರ್ಯಕ್ರಮದಲ್ಲಿ
ಹಲವಾರು ವರ್ಷಗಳಿಂದ ಕಂಬಳ🐃🐃 ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಅವಿಭಕ್ತ ಕುಟುಂಬ ಪದ್ಧತಿಯಿಂದ, ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿರುವ ಸ್ವರ್ಗೀಯ ವೆಂಕಪ್ಪ ಗೌಡರ ಸುಪುತ್ರ ರಿಗೆ ಅವರ ಸಾಧನೆಯನ್ನು ಗುರುತಿಸಿ ಕಜೆಕಾರು ಅಂಬಡೆಮಾರು ಗಂಗಾಧರ್ ಪೂಜಾರಿಯವರಿಂದ ಕಂಬಳದ ಕೋಣಗಳು ಹಾಗೂ ಯಜಮಾನರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು...
ಗಂಗಾಧರ ಪೂಜಾರಿ ಅವರು ಕಳೆದ ದಶಕದಲ್ಲಿ ನೇಗಿಲು ಹಾಗೂ ಹಗ್ಗ ವಿಭಾಗದಲ್ಲಿ ಕೋಣಗಳನ್ನು ಓಡಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಗಂಗಾಧರ ಪೂಜಾರಿಯವರು ಓರ್ವ ಕಂಬಳ ಅಭಿಮಾನಿಯಾಗಿ ,
ಹಾಗೂ ಕಂಬಳದ ಓಟಗಾರನಾಗಿ, ಇಂದಿನ ಅವರ
" ಸೌಭಾಗ್ಯ ಸಂಭ್ರಮ"
ಬಡ ಹೆಣ್ಣುಮಗಳ ಕಣ್ಣೀರು ಒರೆಸುವ ಕಾರ್ಯಕ್ರಮದಲ್ಲಿ,
ಗಂಗಾಧರ ಪೂಜಾರಿಯವರು ಕಂಬಳದ
ಅಭಿಮಾನವನ್ನು ಉಳಿಸಿ ಕಂಬಳದ ಯಜಮಾನರನ್ನು ಪ್ರೋತ್ಸಾಹಿಸಿ ಸನ್ಮಾನಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ
ಈ ಕಾರ್ಯಕ್ರಮದಲ್ಲಿ ಊರ-ಪರವೂರ ಗಣ್ಯಾತಿಗಣ್ಯರು ಹಾಗೂ ಗಂಗಾಧರ ಪೂಜಾರಿ ಅವರ ಕುಟುಂಬದವರು ಪಾಲ್ಗೊಂಡಿದ್ದರು
"ಕಂಬಳ ಉಳಿಸಿ ಬೆಳೆಸಿ"
ಓರ್ವ ಕಂಬಳ ಅಭಿಮಾನಿ.
No comments:
Post a Comment