26 Feb 2020

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ವೇಣೂರುನಿಂದ ಹೊರೆಕಾಣಿಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ವೇಣೂರಿನಿಂದ ಹೊರೆಕಾಣಿಕೆ
ವೇಣೂರು: ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರದಲ್ಲಿ ನಡೆಯಲಿರುವ ಪ್ರತಿಷ್ಠಾಬ್ರಹ್ಮಕಲಶೋತ್ಸವಕ್ಕೆ ವೇಣೂರು ವಲಯದಿಂದ ಸಮರ್ಪಿಸುವ ಹೊರೆಕಾಣಿಕೆ ಮೆರವಣಿಗೆಗೆ ಮಂಗಳವಾರ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಚಾಲನೆ ನೀಡಿದರು.
ವೇಣೂರು, ಹೊಸಂಗಡಿ, ಬಡಕೋಡಿ, ಗುಂಡೂರಿ, ಕುಕ್ಕೇಡಿ, ಕೊಕ್ರಾಡಿ ಮುಂತಾದ ಗ್ರಾಮಗಳಿಂದ ಸಂಗ್ರಹಿಸಲಾದ ಹಸಿರುವಾಣಿ ಹೊರೆಕಾಣಿಕೆಗಳನ್ನು ಪಿಕಪ್ ವಾಹನಗಳ ಮೂಲಕ ನಂದನಬಿತ್ತ್‌ಲ್ ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಯಿತು. ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಯುವವಾಹಿನಿ ಘಟಕ ಮತ್ತು ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿ ವಿವಿಧ ಪದಾಧಿಕಾರಿಗಳಾದ ನಿತೀಶ್ ಎಚ್., ನವೀನ್ ಪೂಜಾರಿ ಪಚ್ಚೇರಿ, ಯೋಗೀಶ್ ಬಿಕ್ರೊಟ್ಟು, ಸೂರ್ಯನಾರಾಯಣ ಡಿ.ಕೆ., ವಿಶ್ವನಾಥ ಪೂಜಾರಿ ದಡ್ಡಾಲ್‌ಪಲ್ಕೆ, ಹರೀಶ್ ಕುಮಾರ್ ಪೊಕ್ಕಿ, ಪಿ. ಹರಿಪ್ರಸಾದ್, ನ್ಯಾಯವಾದಿ ಸತೀಶ್ ಪಿ.ಎನ್. ಮೂಡುಕೋಡಿ, ಹರೀಶ್ ಪಿ.ಎಸ್., ಪೂವಪ್ಪ ಪೂಜಾರಿ ಪರನೀರು, ಸದಾನಂದ ಪೂಜಾರಿ ಕುಕ್ಕೇಡಿ, ಸತೀಶ್ ಉಜಿರ್ಧಡ್ಧ,ಕೃಷ್ಣಪ್ಪ ಪೂಜಾರಿ ಗಾಂಧಿನಗರ, ಗುರುಪ್ರಶಾಂತ್ ಸುದೆಕಾರು, ಜಯಂತ್ ಕೋಟ್ಯಾನ್ ಕುಕ್ಕೇಡಿ,ಸಂಪು ಬಿರ್ವ, ಸನತ್ ಬಿರ್ವ ಉದಯ ಹಚ್ಚೇವು, ಮೆರವಣಿಗೆಯ ನೇತೃತ್ವ ವಹಿಸಿದ್ದರು . ಗೆಜ್ಜೆಗಿರಿ ಬ್ರಹ್ಮಕಲಶೋತ್ಸವದ ಜೊತೆ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ  ಸ್ವಾಗತಿಸಿ,ವಂದಿಸಿದರು,

No comments:

Post a Comment