ಮಂಗಳೂರು ಲಕ ಸುದ್ದಿ
ಗೌರವಾನ್ವಿತ ಭಗವತ್ ಭಕ್ತ ಭಾಂದವರೇ,
ತಮಗೆ ಪ್ರಣಾಮಗಳು,
ಮಾರ್ಚ್ 6 ರಿಂದ ಮಾರ್ಚ್ 13 ರ ವರೆಗೆ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿದ ವರ್ಷಾವದಿ ಜಾತ್ರೆ ಹಾಗೂ ಮಹಾಶಿವರಾತ್ರಿ 2021ರ ಮಹೋತ್ಸವದಲ್ಲಿ ತಾವೆಲ್ಲ ಭಕ್ತಿ ಭಾವಗಳಿಂದ ಪಾಲ್ಗೊಂಡು ಈ ಪುಣ್ಯ ಕಾರ್ಯದ ಯಶಸ್ವಿಗೆ ಸಹಕರಿಸಿದ್ದಿರಿ.
ನಮ್ಮ ನಿಮ್ಮೆಲ್ಲರ ಜನನಾಯಕರು ಹಾಗೂ ಶ್ರೀ ಕ್ಷೇತ್ರ ನವೀಕರಣದ ರೂವಾರಿಗಳಾದ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಈ ಪುಣ್ಯ ಕಾರ್ಯವು ಧಾರ್ಮಿಕವಾಗಿ, ಭಕ್ತಿಪೂರ್ವಕವಾಗಿ ಯಶಸ್ವಿಯಾಗಿ ನಡೆದದ್ದು ಸಂತಸ ತಂದಿದೆ.
ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಭಕ್ತರು, ಸಮಾಜ ಭಾಂಧವರು, ಹಿತೈಷಿಗಳಿಗೆ ಶ್ರೀ ನಾರಾಯಣ ಗುರುಗಳು , ಶ್ರೀ ಗೋಕರ್ಣನಾಥ, ಮಾತಾ ಶ್ರೀ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಕ್ಷೇತ್ರದ ಸರ್ವಶಕ್ತಿಗಳು ತಮಗೆ ಒಳಿತನ್ನು ನೀಡಲೆಂದು ಪ್ರಾರ್ಥಿಸುತ್ತೇವೆ...
ಹೆಚ್.ಎಸ್.ಸಾಯಿರಾಂ- ಅಧ್ಯಕ್ಷರು
ಹಾಗೂ ಆಡಳಿತ ಮಂಡಳಿ ಸದಸ್ಯರು
ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು.
No comments:
Post a Comment