8 Feb 2021

*ಬಿಲ್ಲವ ಸಮಾಜಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವವರ ವಿರುದ್ದ ಯುವಕರು ಸಜ್ಜುಗೊಂಡಿದ್ದಾರೆ* ಇದು ನಿಜ....!!!!

ಮಂಗಳೂರು ಲಕ ವಿಶೇಷ ಸುದ್ದಿ:
*ಬಿಲ್ಲವ ಸಮಾಜಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವವರ ವಿರುದ್ದ ಯುವಕರು ಸಜ್ಜುಗೊಂಡಿದ್ದಾರೆ*

ಬಿಲ್ಲವ ಸಮಾಜ ಹಾಗೂ ಗೌರವಾನ್ವಿತ ಜನಾರ್ಧನ ಪೂಜಾರಿಯವರ ಕುರಿತು ಕೀಳು ಮಟ್ಟದಲ್ಲಿ ನಾಲಗೆ ಹರಿಯಬಿಟ್ಟು ಮತ್ತೆ ಕ್ಷಮೆ ಕೇಳಿದ ಜಗದೀಶ ಅಧಿಕಾರಿಯ ವರ್ತನೆ ನಿಜಕ್ಕೂ ದುರಹಂಕಾರದ ಪರಮಾವಧಿ. ನಮ್ಮ ಸಮಾಜವನ್ನು ಈ ಮಟ್ಟದಲ್ಲಿ ಟೀಕಿಸಿ,ಅವಹೇಳನ ಮಾಡಿರುವುದರ ಹಿಂದೆ ದುರುದ್ದೇಶ ಇರುವುದಂತೂ ಸತ್ಯ. ಸಾಮರಸ್ಯವನ್ನು ಕದಡುವ ಇಂತಹ ನಡವಳಿಕೆ ಖಂಡನೀಯ.ಜಗದೀಶ ಅಧಿಕಾರಿಯ ಅತ್ಯಂತ ಕೀಳು ಮನಸ್ಥಿತಿಯನ್ನು ಸರ್ವರೀತ್ಯಾ ವಿರೋಧಿಸುತ್ತೇವೆ.
ಪದೇ ಪದೇ ಬಿಲ್ಲವ ಸಮಾಜಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅನ್ಯರು ವ್ಯತಿರಿಕ್ತವಾಗಿ ಪ್ರಕಟಗೊಳ್ಳುವ ವಿರುದ್ಧ ಸಮಾಜದ ಯುವ ಬಳಗ ಜಾಗೃತಗೊಂಡಿದೆ.ಈ ಸಂದರ್ಭದಲ್ಲೂ ಸಮಾಜದ ವಿವಿಧ ಸಂಘ ಸಂಸ್ಥೆಗಳ ಬಹುತೇಕ ಬಿಲ್ಲವ ಯುವ ವೃಂದವು ಮುಕ್ತ ಮನಸ್ಥಿತಿಯಿಂದ ಹೋರಾಟದ ನಿಲುವನ್ನು ತೋರಿಸಿದ್ದು ಸ್ವಾಗತಾರ್ಹ.ಸಮಾಜವೆಂದಾಕ್ಷಣ ನಾವು ಯಾವುದೇ ಪಕ್ಷಬೇಧವಿಲ್ಲದೆ ಒಗ್ಗೂಡಲು ಸದಾ ಸಿದ್ದರಿದ್ದೇವೆ.ಜಗದೀಶ ಅಧಿಕಾರಿ ಹಾಗೂ ಆತನಂತಿರುವ ಯಾರೆ ದುಷ್ಟರಿಗೂ ಬಿಲ್ಲವ ಸಮಾಜ ಎಚ್ಚರಿಕೆಯನ್ನು ನೀಡಲು ಬಯಸುತ್ತದೆ.

*ಪ್ರವೀಣ್ ಎಂ ಪೂಜಾರಿ*
 *ಅಧ್ಯಕ್ಷರು*
 *ಹಾಗೂ ಸರ್ವ ಸದಸ್ಯರು*
*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)*

No comments:

Post a Comment