30 Oct 2020

*ನಿಸ್ವಾರ್ಥ ಸ್ವಯಂ ಸೇವಕರ ಸ್ಫೂರ್ತಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪದ್ಮರಾಜ್ ಸರ್*

ಮಂಗಳೂರು ಲಕ ಸುದ್ದಿ:
*ನಿಸ್ವಾರ್ಥ ಸ್ವಯಂ ಸೇವಕರ ಸ್ಫೂರ್ತಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪದ್ಮರಾಜ್  ಸರ್*

   ನಾನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸ್ವಯಂ ಸೇವಕನಾಗಿ 1,2 ದಿವಸ ಕ್ಷೇತ್ರದ ಸೇವೆ ಮಾಡಬೇಕೆಂದು ಬಂದಿದ್ದೆ, ಪದ್ಮರಾಜ್ ಸರ್ ರವರು ಬಹಳ ಆತ್ಮೀಯವಾಗಿ ಮಾತನಾಡಿದರು ಪ್ರತಿಯೊಬ್ಬರಿಗೂ  ಈ ದೇವಸ್ಥಾನದಲ್ಲಿ ಹಕ್ಕಿದೆ  ಇಲ್ಲಿ ನಿಮ್ಮ ಸೇವೆ ನವರಾತ್ರಿಯ ಎಲ್ಲಾ ದಿನಗಳಲ್ಲಿ ಬೇಕು   ಶ್ರೀ ಗೋಕರ್ಣನಾಥ ದೇವರು ಒಳ್ಳೆದು ಮಾಡುತ್ತಾರೆ ಎಂದು ಹೇಳಿ ನನಗೆ ನವರಾತ್ರಿಯ ಎಲ್ಲಾ ದಿನಗಳಲ್ಲಿ ಸೇವೆ ಮಾಡಲು ಪ್ರೇರಣೆಯಾದರು . ಈ ಮಾತಿನಲ್ಲಿ ಮಾತೃ ಹೃದಯದ ಪ್ರೀತಿ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಕುಟುಂಬದ ಹಿರಿಯಣ್ಣನ ಗುಣ ಕೂಡ ಇತ್ತು.  ಮಂಗಳೂರು ದಸರಾ ವನ್ನು ಮಾದರಿ ದಸರಾ ಮಾಡಿ ಇಡೀ ದೇಶಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಾದರಿಯಾಗ ಬೇಕು, ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷವಾಕ್ಯ ದಂತೆ ದಸರಾ ನಡೆಯ ಬೇಕು ಎಂಬ ಅವರ ಆಸೆ ಆದರ್ಶಗಳಿಗೆ ನಾನು ಕೂಡ  ಜೊತೆ ಯಾಗ ಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು. ನವರಾತ್ರಿಯ ಎಲ್ಲಾ ದಿನಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡೆ  ಕ್ಷೇತ್ರದ ಶಕ್ತಿಯ ಅನುಭವ ನನ್ನೊಳಗೆ ಆಗುತಿತ್ತು, ಶ್ರಿ ಬಿ ಜನಾರ್ಧನ ಪೂಜಾರಿ ಯವರ ಮಾರ್ಗದರ್ಶನ ದಲ್ಲಿ ಹೆಜ್ಜೆ ಇಡುತ್ತಿದ್ದ ಪದ್ಮರಾಜ್ ಸರ್ ಜೊತೆ ಇಡೀ ಸ್ವಯಂ ಸೇವಕರ ದಂಡೇ ಕೆಲಸ ಮಾಡಿತಿತ್ತು ಪ್ರತೀ ದಿನ ನಾವು ಸ್ವಯಂ ಸೇವೆ ಯಲ್ಲಿ ತೊಡಗಿಸಿಕೊಂಡಾಗ ರಾತ್ರಿ ನಮನೆಲ್ಲಾ ಕರೆದು ಆತ್ಮೀಯವಾಗಿ ಮಾತನಾಡಿಸಿ ಏನಾದರೂ ವ್ಯವಸ್ಥೆ ಯನ್ನು ಉತ್ತಮ ಗೊಳಿಸಲು ಸಲಹೆ ಇದ್ದರೆ ಕೊಡಿ ಎಂದು ಕೇಳುತ್ತಿದ್ದರು, ನಮ್ಮ ಮಾತನ್ನು ಆಸಕ್ತಿಯಿಂದ ಆಲಿಸುತ್ತಿದ್ದರು ನಾವು ಹೇಳುವುದರಲ್ಲಿ ಒಳ್ಳೆಯ ಅಂಶಗಳನ್ನು ಗಮನಿಸುತ್ತಿದ್ದರು. ಇಡೀ ಮಂಗಳೂರು ದಸರಾ ಯಶಸ್ವಿಯಾಗಲು ಮೂಲ ಪ್ರೇರಕ ಶಕ್ತಿ ಶ್ರೀ ಬಿ ಜನಾರ್ಧನ ಪೂಜಾರಿ ಯವರ ಮಾರ್ಗದರ್ಶನ ದಲ್ಲಿ ಮುನ್ನಡೆಯುತ್ತಿರುವ ಪದ್ಮರಾಜ್ ಸರ್ ಎಂದರೆ ತಪ್ಪಾಗಲಾರದು. ಇಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರುವಾರಿ ಶ್ರೀ ಬಿ ಜನಾರ್ಧನ ಪೂಜಾರಿ ಯವರ ಜೊತೆ ಪದ್ಮರಾಜ್ ಸರ್ ರವರು ಮಾಡುವ ಒಳ್ಳೆಯ ಕೆಲಸ ಗಳ ಬಗ್ಗೆ ಜನರು ಮಾತಾಡಿ ಕೊಳ್ಳುವುದನ್ನು ಕೇಳುವಾಗ ಸಂತೋಷ ವಾಗುತ್ತದೆ. ನಾನು ಶ್ರೀ ಕ್ಷೇತ್ರದಲ್ಲಿ ಸೇವೆ ಮಾಡಿ ನನ್ನ ಜೀವನ ಪಾವನವಾಯಿತು. ಇಡೀ ದೇಶಕ್ಕೆ ಮಾದರಿಯಾದ ದಸರಾ ಮಾಡಲು ಎಲ್ಲರಿಗೂ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ಪದ್ಮರಾಜ್ ಸರ್ ಗೆ ಹಾಟ್ಸ್ ಆಪ್🙏

✍️ಪ್ರವೀಣ್ ಅಂಚನ್ ಆರ್ಕುಳ

No comments:

Post a Comment