3 Oct 2020

ಜೆ. ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನದ ವತಿಯಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 172 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ- ನಾಳೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು

 ಮಂಗಳೂರು ಲಕ ಸುದ್ದಿ: ಜೆ. ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನದ ವಿದ್ಯಾರ್ಥಿ ವೇತನ ಪ್ರೋತ್ಸಾಹ ಧನಕ್ಕೆ ಅರ್ಹರಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 172 ವಿದ್ಯಾರ್ಥಿಗಳಿಗೆ  ಒಟ್ಟು 10 ಲಕ್ಷಗಳ ಮೌಲ್ಯದ ಪ್ರೋತ್ಸಾಹ ಧನವನ್ನು  ಅಕ್ಟೋಬರ್ ತಿಂಗಳ 4ನೇ ತಾರೀಖಿನಂದು ಮಂಗಳೂರಿನ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ವಿತರಿಸಲಾಗುತ್ತಿದೆ. ಶ್ರೀ ಗೋಕರ್ಣ ನಾಥ ಕ್ಷೇತ್ರ ಹಾಗೂ ಗುರು ಚಾರಿಟಬಲ ಟ್ರಸ್ಟ್ ವತಿಯಿಂದ  ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

No comments:

Post a Comment