11 Sept 2020

ಯಾವುದೇ ಪ್ರತಿಫಲ ಬಯಸದೆ ಸಮಾಜದ ಹಿತಕ್ಕಾಗಿ ತನ್ನ ಕೈಲಾದಷ್ಟು ಸೇವೆ ಮಾಡುವ ಸೇವಾ ಮಾಣಿಕ್ಯ,ಉಡುಪಿ ಜಿಲ್ಲಾ ಅಧ್ಯಕ್ಷರು ಮತ್ತು ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ಸರಳ ಸಜ್ಜನ ವ್ಯಕ್ತಿತ್ವ ಪ್ರವೀಣ್ ಎಮ್. ಪೂಜಾರಿ .

ಮಂಗಳೂರು ಲಕ ಸುದ್ದಿ:
ಯಾವುದೇ ಪ್ರತಿಫಲ ಬಯಸದೆ ಸಮಾಜದ  ಹಿತಕ್ಕಾಗಿ ತನ್ನ ಕೈಲಾದಷ್ಟು ಸೇವೆ ಮಾಡುವ ಸೇವಾ ಮಾಣಿಕ್ಯ,ಉಡುಪಿ ಜಿಲ್ಲಾ ಅಧ್ಯಕ್ಷರು ಮತ್ತು ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ಸರಳ ಸಜ್ಜನ ವ್ಯಕ್ತಿತ್ವ ಪ್ರವೀಣ್ ಎಮ್. ಪೂಜಾರಿ *ಯವರು ಮಲ್ಪೆ ಕೊಡವೂರಿನ  ಮೋಹನ್ ಪೂಜಾರಿ ಮತ್ತು ಅಪ್ಪಿ ಇವರ ಮಗ,ಪ್ರಾಥಮಿಕ ಶಿಕ್ಷಣವನ್ನು ಮಲ್ಪೆಯಲ್ಲಿ ಪಿ. ಯು.ಸಿ ಯನ್ನು ಬೋರ್ಡ್ ಹೈಸ್ಕೂಲ್ ಉಡುಪಿ ಯಲ್ಲಿ ಬಿ. ಎ ಡಿಗ್ರಿ ಪಿಪಿಸಿ ಯಲ್ಲಿ  ಮತ್ತು  ಎಲ್.ಎಲ್. ಬಿ ಯನ್ನು ಬಾಳಿಗ ಲಾ ಕಾಲೇಜ್ ಕುಂಜಿಬೆಟ್ಟಲ್ಲಿ ಮುಗಿಸಿದ ಇವರು ಈಗ  ನ್ಯಾಯವಾದಿವಾಗಿ ಸೇವೆಯನ್ನು ಮಾಡುತ್ತಿದ್ದಾರೆ*.
    
*ಉಡುಪಿ ಜಿಲ್ಲೆಯ ಬಿಲ್ಲವ ವೇದಿಕೆಯ ಜಿಲ್ಲಾ ಅಧ್ಯಕ್ಷರು ಆಗಿರುವ ಇವರು, ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗರೋಡಿ ಗುರಿಕಾರ ಸಮ್ಮೇಳನವನ್ನು  ಯಶಸ್ವಿಯಾಗಿ ನಿರ್ವಹಿಸಿದ  ಹೆಗ್ಗಳಿಕೆ ಇವರದ್ದು*. 

 *ವೃತ್ತಿಯಲ್ಲಿ  ನ್ಯಾಯವಾದಿ  ಆಗಿರುವ  ಇವರು  ಜಾತಿ ಭೇದ ಇಲ್ಲದೆ  ನ್ಯಾಯದ  ಪರವಾಗಿ ಇದ್ದು  ನ್ಯಾಯ  ದೊರಕಿಸಿ  ಕೊಟ್ಟಿದ್ದಾರೆ,ಅನೇಕ ಅಸಹಾಯಕರ ಪರವಾಗಿ ಉಚಿತವಾಗಿ ವಕಾಲತ್ತು   ಮಾಡಿ ಅನ್ಯಾಯ ಆಗದಂತೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ*. 
     
     *ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಮಾಣಿಕ್ಯ ಇವರು ದೀನ ದಲಿತರ  ಸೇವೆ ಮಾಡುವುದು ಮತ್ತು  ಅಪಾರ ಸಂಖ್ಯೆಯ ಗೆಳೆಯರ  ಬಳಗವನ್ನು ಹೊಂದಿರುವ ಸ್ನೇಹ ಜೀವಿ*.

      *ಬಿಲ್ಲವ ಮಹಾ ಸಮಾವೇಶವಾಗಲು ಮೂಲ  ಕಾರಣ ಆದವರು ಇದೆ  ಪ್ರವೀಣ್ ಪೂಜಾರಿ* , *ಇವರ ಬಗ್ಗೆ ತುಂಬ ಹೆಮ್ಮೆ ಇದೆ*.. *ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಚಿರಋಣಿ,ಹೀಗೆ ತನ್ನ ಕೈಲಾದಷ್ಟು ಸೇವೆ  ಮಾಡುವ ನಿಮಗೆ ಆ ಭಗವಾನ್ ಶ್ರೀ ನಾರಾಯಣ ಗುರುದೇವರು  ಆರೋಗ್ಯ ಆಯುಷ್ಯ,ಭಾಗ್ಯ ಕರುಣಿಸಲಿ ಮತ್ತು ಈ ಸೇವೆ ಹೀಗೆ  ಮುಂದುವರಿಯಲಿ ಶುಭವಾಗಲಿ...

No comments:

Post a Comment