*ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಕ್ತಿ ಸುಧೆಯ ವಿಡಿಯೋ ಬಿಡುಗಡೆ.*
ಜಗತ್ತಿನ ಜನತೆಯ ಉದ್ಧಾರ ಮತ್ತು ನ್ಯಾಯ ಧರ್ಮಕ್ಕಾಗಿ ಜ್ಞಾನದ ದೀಪವ ಬೆಳಗಿಸಿದ ಅಗಣಿತ ಮಹಿಮನ ಅವತಾರ ಬ್ರಹ್ಮ ಶ್ರೀ ನಾರಾಯಣ ಗುರುದೇವರ ಬಗ್ಗೆ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಯವರು ಹಾಡಿರುವ ಭಕ್ತಿ ಸುಧೆಯ ವಿಡಿಯೋ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗುರು ದೇವರ ಸನ್ನಿಧಿ ಯಲ್ಲಿ ಜರಗಿತು.
ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಸಾಯಿರಾಂ ರವರು ವಿಡಿಯೋ ಬಿಡುಗಡೆ ಮಾಡಿದರು ಈ ಸಂಧರ್ಭ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ರಾಜೇಂದ್ರ ಚಿಲಿಂಬಿ, ರಾಮಚಂದ್ರ ಪೂಜಾರಿ ದೇರಬೈಲ್, ಸುರೇಶ್ ಕೆ ಪಾಂಡವರ ಕಲ್ಲು, ಮನೋಹರ್ ಕುಮಾರ್ ಇಳಂತಿಲ ನ್ಯಾಯವಾದಿಗಳು, ಅಜಿತ್ ಪೂಜಾರಿ ಗ್ರಾಮ ಚಾವಡಿ, ಜಿನ್ನಪ್ಪ ಪೂಜಾರಿ ಆಟಾಲು, ಶೇಷಗಿರಿ ಪೂಜಾರಿ, ಸಂಗೀತ ನಿರ್ದೇಶನ ಮಾಡಿದ ವಾಸುದೇವ ಕೊಣಾಜೆ,ಸುಕೇಶ್ ಪೂಜಾರಿ ಪಾಲಡ್ಕ, ವಿಜೇತ್ ಗಾಣಿಗ,ರಾಮ್ ಪ್ರಸಾದ್ ಭಂಡಾರಿ, ಸೃಜನ್ ಭಂಡಾರಿ, ಮನ್ವಿತ್, ನಯನ, ಸೀತಮ್ಮ ಮುಂತಾದವರು ಉಪಸ್ಥಿತರಿದ್ದು ಹರೀಶ್ ಪೂಜಾರಿ ಕೊಣಾಜೆ ಮತ್ತು ಸುರೇಖ ಅವರ ಪುತ್ರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಯವರಿಗೆ ಶುಭ ಹಾರೈಸಿದರು.
ಗುರುದೇವರ ಭಕ್ತಿ ಸುಧೆಯನ್ನು ಕೇಳಿ.. ಈ ಮುಂದಿನ ಲಿಂಕ್. https://youtu.be/5rrJy9OEpy8
No comments:
Post a Comment