17 Mar 2020

*ಕೊಣಲು ದೈವಸ್ಥಾನ ಬಿಲ್ಲವರಿಗೆ ಪ್ರವೇಶ ನಿರಾಕರಣೆಯ ಕುರಿತು ಪುತ್ತೂರು ಬಿಲ್ಲವ ಸಂಘದಿಂದ ಸ್ಪಷ್ಟನೆ*

*ಕೊಣಲು ದೈವಸ್ಥಾನ ಬಿಲ್ಲವರಿಗೆ ಪ್ರವೇಶ ನಿರಾಕರಣೆಯ ಕುರಿತು  ಪುತ್ತೂರು ಬಿಲ್ಲವ ಸಂಘದಿಂದ ಸ್ಪಷ್ಟನೆ* 

*ಪ್ರೀತಿಯ ಸಮಾಜದ ಬಾಂಧವರೇ* 
 ಈಗಾಗಲೇ ಕೋಣಾಲು ದೇವಸ್ಥಾನಕ್ಕೆ ಬಿಲ್ಲವ ಸಮಾಜದವರಿಗೆ ಪ್ರವೇಶ ನಿರ್ಬಂಧದ ಪುತ್ತೂರು ಬಿಲ್ಲವ ಸಂಘಕ್ಕೆ ಲಿಖಿತ ರೂಪದಲ್ಲಿ ಬಂದ  ದೂರಿನಿಂದ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಯಾಗುತ್ತಿರುವುದು ಮನಗಂಡು ಆಡಳಿತ ಸಮಿತಿಯ  ಅಧ್ಯಕ್ಷರಾದ ಸತೀಶ್ ರೈ  ಮತ್ತು ಟ್ರಸ್ಟಿನ ಸದಸ್ಯರ ಜೊತೆ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರ ನೇತೃತ್ವದಲ್ಲಿ   ಸಮನ್ವಯದ ಮಾತಿನ ಮೂಲಕ  ಬಗೆಹರಿಸಲಾಗಿದೆ. ಇಲ್ಲಿ ಎಲ್ಲಾ ಸಮಾಜದವರಿಗೆ ಮುಕ್ತ ಅವಕಾಶವಿದೆ ಎಂದು ಒಪ್ಪಿಗೆಯನ್ನು ಸೂಚಿಸಿರುತ್ತಾರೆ ಮಾತ್ರವಲ್ಲದೆ ಲಿಖಿತ ರೂಪದಲ್ಲಿ ಸಂಘಕ್ಕೆ ಉತ್ತರ  ನೀಡಿರುತ್ತಾರೆ. ಮುಂದೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸದಂತೆ ವಿನಂತಿ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ವಿಠಲ್ ರೈ ಮತ್ತು ಪ್ರಶಾಂತ್ ರೈ ಹಾಗೂ ಬಿಲ್ಲವ ಸಂಘದ ಪ್ರಮುಖರಾದ ಡಾ. ಸದಾನಂದ ಕುಂದರ್, ಶಶಿಧರ್ ಕಿನ್ನಿಮಜಲ್, ಆರ್.ಸಿ ನಾರಾಯಣ ರೆಂಜ,   ಶ್ರೀಮತಿ  ಉಷಾ ಅಂಚನ್,ಸದಾನಂದ ಆಲಂಕಾರು,   ಡಾ. ರಾಜಾರಾಮ್,  ಅಜಿತ್ ಪಾಲೇರಿ, ಮೋಹನ್ ನೆಲ್ಯಾಡಿ, ಚಂದ್ರಶೇಖರ ಬಾಣಜಾಲು,ನೋಣಯ್ಯ ಪೂಜಾರಿ ಹಾಗೂ ಕೊಣಲು ಗ್ರಾಮದ ಬಿಲ್ಲವ ಸಮಾಜ ಬಾಂಧವರು ಉಪಸ್ಥಿತರಿದ್ದರು.  ಮುಂದೆ ಎಲ್ಲರಿಗೂ ಕೊಣಲೂ ದೇವತೆಯ ಆಶೀರ್ವಾದ ಇರಲಿ.
 *ಶಶಿಧರ್ ಕಿನ್ನಿಮಜಲ್*
*ಕಾರ್ಯದರ್ಶಿ ಬಿಲ್ಲವ ಸಂಘ ಪುತ್ತೂರು*

No comments:

Post a Comment