*ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ, ಮಂಗಳೂರು*
🌷🌷🌷🌷🌷🌷🌷
ಆತ್ಮೀಯರೇ,
ನಮ್ಮ ಸಮಾಜದ ವಿಧ್ಯಾರ್ಥಿಗಳು ಮೆರಿಟ್ ನಲ್ಲಿ ಸೀಟುಗಳನ್ನು ಪಡೆದರೂ, ದುಬಾರಿದ ದರದ ಹಾಸ್ಟೆಲ್ ಫೀಸ್ ಗಳನ್ನು ಪಾವತಿಸಲು ಅನಾನುಕೂಲವಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿರುತ್ತಾರೆ. ಇದನ್ನು ಮನಗಂಡು ನಮ್ಮ ಸಮಾಜಕ್ಕೂ ಒಂದು ಹಾಸ್ಟೆಲ್ ಬೇಕು ಎಂಬ ಕಲ್ಪನೆಯನ್ನು ಬಹಳ ವರ್ಷಗಳಿಂದ ಇಟ್ಟು, ಅದಕ್ಕಾಗಿ ಹಗಲಿರುಲು ಸತತ ಪರಿಶ್ರಮ ಪಟ್ಟು ಹಾಸ್ಟೆಲ್ ನಿರ್ಮಾಣದ ಕಾರ್ಯ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತಿದೆ.
*ಮಂಗಳೂರಿನ ಕುಂಜತ್ತಬೈಲ್ ನಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ 5.25 ಕೋಟಿ ವೆಚ್ಚದಲ್ಲಿ ಬಿಲ್ಲವ ವಿಧ್ಯಾರ್ಥಿಗಳ ಹಾಸ್ಟೆಲ್ ನಿರ್ಮಣಗೊಂಡಿದೆ*.
ಇದರ ಲೋಕಾರ್ಪಣಾ ಸಮಾರಂಭ ಎಪ್ರೀಲ್ 19 ಭಾನುವಾರ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
*ಬಿಲ್ಲವ ವಿಧ್ಯಾರ್ಥಿಗಳ ಹಾಸ್ಟೆಲ್ ನ್ನು ಕರ್ನಾಟಕ ಸರಕಾರದ ಘನವೆತ್ತ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ*.
ಹಾಗೆಯೇ ಮಾನ್ಯ ಸಚಿವರುಗಳು, ಶಾಸಕರುಗಳು, ಸಮಾಜದ ಹಿರಿಯರುಗಳು ಭಾಗವಹಿಸಲಿದ್ದಾರೆ.
ಬಿಲ್ಲವ ಸಮಾಜದ ಪ್ರಪ್ರಥಮ ಹಾಸ್ಟೆಲ್ ಎಂಬ ಹೆಗ್ಗಲಿಕೆ ಇರುವ ಈ ಲೋಕಾರ್ಪಣಾ ಸಮಾರಂಭಕ್ಕೆ ಸಮಾಜಭಾಂದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.
*ಶ್ರೀ ನವೀನ್ ಚಂದ್ರ ಡಿ. ಸುವರ್ಣ*
ಅದ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ).
Sir yavaga navu register madbeku plzz reply me
ReplyDelete