25 Nov 2019

ಬಹುಮುಖ ಕಲಾವಿದ...

#ತುಳುನಾಡಿನ_ಮಣ್ಣಿನ_ಹುಡುಗ_ಮುದ್ದು_ಮುಖದ_ಚೆಲುವ.
      #ಸ್ತ್ರೀ_ಪಾತ್ರದಾರಿ
 #ಸತೀಶ್_ಪೂಜಾರಿ_ಅಳಿಯೂರು
      ದಿ|| ಶಿವಪ್ಪ ಪೂಜಾರಿ ಹಾಗೂ ನೀಲಮ್ಮ ಪೂಜಾರ್ತಿಯವರ ಪುತ್ರ ರಂಗಭೂಮಿ ಕಲಾವಿದ 
  #ಸತೀಶ್_ಪೂಜಾರಿ_ಅಳಿಯೂರು
      ಕಲೆ ಎಂಬುದು ಪ್ರಾರ್ಥಿಸಿದರೆ ಬರುವಂತದು ಅಲ್ಲ.ಅದು ಹುಟ್ಟಿನಿಂದಲ್ಲೆ ರಕ್ತದಲ್ಲಿ ಬಂದಿರುತ್ತದೆ..ಅದಕ್ಕೆ ಜೀವ ತುಂಬುವ ಕೆಲಸ ಮಾಡಬೇಕಷ್ಟೆ. ಅಂತಹ ಕಲೆಗೆ ಜೀವ ತುಂಬಿದ ಪರಿಶ್ರಮ ಅವರನ್ನು ಸನ್ಮಾನಿಸುವ ಮೂಲಕ ಎದ್ದು ಕಾಣುತ್ತದೆ.
       ಸತೀಶ್ ಪೂಜಾರಿ ಅಳಿಯೂರು ಇವರಿಗೆ ಚಿಕ್ಕ ವಯಸ್ಸಿನಿಂದಲ್ಲೂ ನಾಟಕಗಳಲ್ಲಿ ಬಹಳ ಆಸಕ್ತಿ ಹೊಂದಿದ್ದು .ಇವರಿಗೆ ಶನೇಶ್ವರ ಪೂಜಾ ಸಮಿತಿಯಿಂದ ಮೊಟ್ಟ ಮೊದಲ ಬಾರಿಗೆ ಶನೇಶ್ವರ  ದೇವಸ್ಥಾನ ಅಳಿಯೂರು ನಲ್ಲಿ ರಮೇಶ್ ಆಚಾರ್ಯ ನೂರಲ್ ಬೆಟ್ಟು ರವರ ನಿರ್ದೇಶನದಲ್ಲಿ ಮೂಡಿಬಂದ #ದೇವೆರ್ ಗತಿ ಎಂಬ  ನಾಟಕ ಮಾಡುವ ಮೂಲಕ ರಂಗ ಭೂಮಿಗೆ ಮೊದಲ ಹೆಜ್ಜೆಯನ್ನು‌ ಇಟ್ಟರು.
         #ಗಲಿಗೆದ_ಉಲಾಯಿ, #ಎನ್ನ_ಕಥೆ_ಬರೆಪಾರ.ಹೀಗೆಯೇ ಹಲವಾರು ನಾಟಕಗಳು ರಮೇಶ್ ಆಚಾರ್ಯ ನೂರಲ್ ಬೆಟ್ಟು ರವರ ನಿರ್ದೇಶನದಲ್ಲಿ ಮೂಡಿ ಬಂದು ಅದರಲ್ಲಿ ಸತೀಶ್ ಪೂಜಾರಿಯವರ ಪಾತ್ರ ಕೂಡ ಪ್ರಮುಖವಾಗಿರುತ್ತದೆ.

  ಹಾಗೂ ವಿಲಾಸ್ ಕುಮಾರ್ ರವರ ನಿರ್ದೇಶನದಲ್ಲಿ ಕೂಡ ಮೂಡಿಬಂದ #ಕಥೆ_ಕಟ್ಟುವೆರ್, #ಗಗ್ಗರ,#ತಮ್ಮನ್ನ, #ಪನಾರ_ಧೈರ್ಯ_ಇಜ್ಜಿ.ಹೀಗೆಯೇ ಅನೇಕ ಅನೇಕ ನಾಟಕಗಳಲ್ಲಿ ಭಾಗವಹಿಸಿದ ಕೀರ್ತಿ ಇವರದ್ದು.
      ಹಾಗೂ ದಿನಾಕರ್ ಭಂಡಾರಿ ಕಾನಂಜರ್ ರವರ ನಿರ್ದೆಶನದಲ್ಲಿ - #ಪಿರ_ಬನ್ನಾಗ ,#ತೂವಾರ #ಬರ್ಪೆರ್,#ಗುಂಪುಡ್_ಒರಿ_ಗೋವಿಂದೆ.,#ಒಟ್ರಸಿ #ಮಂಡೆ_ಬೆಚ್ಚ.
    ಹಾಗೂ ಗಣೇಶ್ ಬಿ ಅಳಿಯೂರು ರವರ ತಂಡದೊಂದಿಗೆ #ಗೌರಿ_ಗಣಪ, #ನಂಕ್_ನಾಸಿಬ್ #ಇಜ್ಜಿ, #ಪಾರಿಜಾತ,  #ಬರಿತ್ತ_ಇಲ್ಲದ_ಭಾರತಿ, #ಮೂರ್ತೆ_ಮುದರ್ , #ನಮ_ಮೂಲು_ಬಾಡಿಗೆಗ್ , 
    ಹೀಗೆಯೇ ಸರಿ ಸುಮಾರು "1500 " ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು.
ಹೆಣ್ಣು ಕುಲವೇ ನಾಚುವಂತ ಪಾತ್ರಗಳನ್ನು ಮಾಡುತ್ತಿದ್ದರು.ಒಂದು ಹಾಡಿಗೆ #ಹತ್ತು_ಸೀರೆಗಳನ್ನು ಬದಲಾಯಿಸಿ ಪ್ರೇಕ್ಷಕರನ್ನೇ ಮೂಕಸ್ಮಿತವಾಗಿ ಮಾಡಿ ಎಲ್ಲರ ಮನ ಗೆದ್ದವರು.

ಇವರ ಪ್ರತಿಭೆಯನ್ನು ಕಂಡು ಹಲಾವರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

 ಇವರ ಅಭಿನಯವನ್ನು ಗುರುತಿಸಿ ಇವರಿಗೆ ಮೇಕಪ್ ಯಿಂದ ಹಿಡಿದು ಪ್ರತಿಯೊಂದು ವಿಷ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸಹಕರಿಸಿದ ಇವರ ಗುರು ಅಚ್ಯುತ ಮಾರ್ನಾಡ್ ರವರು.
       ಹಾಗೂ ಇವರ ಪ್ರತಿಭೆಯನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಿ ಎಲ್ಲಾ ಕಲಾ ತಂಡಗಳಲ್ಲಿ ಅಭಿನಯಿಸಲು ಕಾರಣರಾದವರು ದಿ|| ಸುರೇಂದ್ರ ಕುಮಾರ್  ಕಲಾತ್ರಪಾದೆ.
   ಇವರ ತಂಡಗಳೊಂದಿಗೆ - #ಮೇಘಾ_ಮುರರಿ
#ಬೈಲಾ_ಕುರಾಲ್,  #ಗುರ್ಕರೆ_ಗುವೆಲ್ಡ್,  #ದೇವೆರ್ #ಮುನಿಂಡ,  #ಕಾಲ_ಕಲ್ಜಿಗ #ಬಾಜೆಲ್ #ಬಾಬು,#ದ್ರುವ_ರಾಶಿ, #ಚಂಡಮಾರುತ,ಹೀಗೆಯೇ ಹಲಾವರು ನಾಟಕಗಳಲ್ಲಿ ಅಭಿನಯಿಸಿದರು..
  
ರಂಗಭೂಮಿಗೆ ಮೊದಲು ಹೆಜ್ಜೆ ಇಡಲು ಅವಕಾಶ ಕೊಟ್ಟ ಶನೇಶ್ವರ ಪೂಜಾ ಸಮಿತಿ ಅಳಿಯೂರು ಇವರಿಗೆ ಹೃದಯಪೂರ್ವಕವಾಗಿ ಕೃತಜ್ಞರಾಗಿರುತ್ತಾರೆ.

    ಇವರ ಪ್ರತಿಭೆಯು ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ.ರಂಗಭೂಮಿಯಲ್ಲಿ ಇನ್ನಷ್ಟೂ  ಹೆಸರು ಬರುವಂತಾಗಲಿ ಎಂಬುದು ನಮ್ಮ ಆಶಯ.
     ತುಳುನಾಡಿನ ಕೀರ್ತಿ ಪಾತಕೆಯನ್ನು ಬಹು ಎತ್ತರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿ.
   #ಶುಭವಾಗಲಿ.
@ಬಿಲ್ಲವ nivas

No comments:

Post a Comment