ಪಂಜಾಬಿನ ವಾರ್ ಹೀರೋ ಸ್ಟೇಡಿಯಂ ಸಂಗ್ರೂರಿನಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಬೈಂದೂರು ತಾಲೂಕಿನ ಬಿಜೂರು ಗ್ರಾಮದ #ಕುಮಾರಿ #ಜ್ಯೋತಿಕಾ #ಪೂಜಾರಿ ಅವರು 4 x100 ರಿಲೇ ಓಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ #ಚಿನ್ನದ ಪದಕವನ್ನು ಪಡೆದರು ಹಾಗೂ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ #ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚುತಿದ್ದಾರೆ.
ಈಕೆ ಮಡಿಕೇರಿಯ ಗೋಣಿ ಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಬೈಂದೂರು ಬಿಜೂರಿನ ಕಾಡಿನತಾರು ರಾಜು ಮತ್ತು ಮಂಜುಳಾ ದಂಪತಿಗಳ ಪುತ್ರಿಯಾದ ಜ್ಯೋತಿಕಾ ಪೂಜಾರಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದಿದ್ದಾರೆ..
No comments:
Post a Comment