“ *ತುಳುವ ಸಂಭ್ರಮ – 2019* ”
*ಗುರುಸೇವಾ ಸಮಿತಿ, ಬಹರೇನ್ ಬಿಲ್ಲವಾಸ್* ದ್ವೀಪ ರಾಷ್ಟ್ರದಲ್ಲಿ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ "ತುಳುವ ಸಂಭ್ರಮ – 2019" ಕಾರ್ಯಕ್ರಮವು ತಾ 16-12-2019 ರಂದು ಸಂಜೆ 5.00 ಗಂಟೆಗೆ ಸರಿಯಾಗಿ ಇಲ್ಲಿನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಲಿದೆ.
ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳು ಹಾಗೂ ಮುಖ್ಯ ಅತಿಥಿಗಳು ತಾಯಿನಾಡಿನಿಂದ ಆಗಮಿಸಲಿದ್ದು ವಿವಿಧ ಗಲ್ಫ್ ರಾಷ್ಟ್ರಗಳ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ತಾಯಿನಾಡಿನ ಸುಪ್ರಸಿದ್ದ ತುಳು ರಂಗಭೂಮಿ ಹಾಗು ತುಳು ಚಲನಚಿತ್ರಗಳಲ್ಲಿ ಮಿಂಚಿ ಮನೆಮಾತಾಗಿರುವ ಹಾಸ್ಯ ಕಲಾವಿದರುಗಳಾದ ಶ್ರೀ ನವೀನ್ ಡಿ, ಪಡಿಲ್, ಶ್ರೀ ಭೋಜರಾಜ ವಾಮಂಜೂರ್, ಶ್ರೀ ಅರವಿಂದ ಬೋಳಾರ್, ಶೋಭರಾಜ್ ಪಾವೂರ್ ಹಾಗು ಸಂಗೀತ ನಿರ್ದೆಶಕರಾದ ಗುರು ಬಾಯರ್ ಈ ಹಾಸ್ಯ ಕಲಾವಿದರಿಂದ "ಆಲಿ ಬಾಬ v/s ಗೋಲಿ ಬಾಬ" ಎಂಬ ವಿನೂತನ ಶೈಲಿಯ ನೆಗೆಕಡಲಲ್ಲಿ ತೇಲಾಡಿಸುವ ಹಾಸ್ಯ ಕಾರ್ಯಕ್ರಮ ಜರುಗಲಿದೆ. ಅಲ್ಲದೆ ಸ್ಥಳೀಯ ಕಲಾವಿದರುಗಳ ವಿವಿಧ ರೂಪಕ, ನೃತ್ಯ ವೈವಿಧ್ಯಗಳಿವೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಪೂರ್ವಸಿದ್ದತೆಗಳು ನಡೆಯುತಿದ್ದು ಬಹರೇನ್ ನ ಕಲಾಪ್ರಿಯರಿಗೆ ರಸದೌತಣವನ್ನು ನೀಡುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುವ ಈ ಸಾಂಸ್ಕೃತಿಕ ಸಂಭ್ರಮ ಬಹರೇನ್ ನಲ್ಲಿ ಒಂದು ಹೊಸ ಚರಿತ್ರೆಯನ್ನು ನಿರ್ಮಿಸಲಿದೆ.
ಈ ತುಳುವ ಸಂಭ್ರಮದಲ್ಲಿ ಕಲಾಪ್ರಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ *ಬಹರೇನ್ ಬಿಲ್ಲವಾಸ್ ನ* ಅದ್ಯಕ್ಷರಾದ *ಶ್ರೀ ಸುರೇಂದ್ರ ಉದ್ಯಾವರ್* ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ *00973 39582392* ಸಂಪರ್ಕಿಸಬಹುದು.
No comments:
Post a Comment