ಕೇರಳ ದೇವರ ನಾಡಿನ ವರ್ಕಳ ಭಗವಾನ್ ಶ್ರೀ ನಾರಾಯಣ ಗುರುದೇವರ ಮಹಾ ಸಾನಿಧ್ಯ ಶಿವಗಿರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ 90ನೇ ವರುಷದ ವಿಶ್ವವಿಖ್ಯಾತ ಶಿವಗಿರಿ ಮಹಾತೀರ್ಥಾಟನೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಭಕ್ತರು ಭಾಗವಹಿಸಿ,ಶ್ರೀ ಗುರುದೇವರ ಕೃಪೆಗೆ ಪಾತ್ರರಾದರು.
Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
31 Dec 2022
31 May 2022
30 May 2022
2022 ಜೂನ್ 12, 13 ರಂದು ಶ್ರೀ ನಾರಾಯಣ ಗುರುಗಳ ಬದುಕು ಮತ್ತು ಚಿಂತನೆ ಕುರಿತು ಎರಡು ದಿನಗಳ ವಿಚಾರ ಕಮ್ಮಟ.
ಮಂಗಳೂರು: ಲಲಿತಕಲಾಮೃತ ವರದಿ:
ಆತ್ಮೀಯರೇ,
ಜೂನ್ 12, 13 (ರವಿವಾರ ಮತ್ತು ಸೋಮವಾರ) ರಂದು ಶ್ರೀ ನಾರಾಯಣ ಗುರುಗಳ ಬದುಕು ಮತ್ತು ಚಿಂತನೆ ಕುರಿತು ಎರಡು ದಿನಗಳ ವಿಚಾರ ಕಮ್ಮಟವೊಂದನ್ನು ಶ್ರೀ ಕ್ಷೇತ್ರ ಸಿಗಂದೂರು, ಸಾಗರ ,ಶಿವಮೊಗ್ಗ ಜಿಲ್ಲೆ ಯಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಅರಿತು ಜನರಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯುವುದು ಹೇಗೆ ಎಂದು ಚಿಂತನ ಮಂಥನ ನಡೆಸುವುದು ಇದರ ಉದ್ದೇಶವಾಗಿರುತ್ತದೆ.
ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಊಟ , ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಿಬಿರಾರ್ಥಿಗಳು ಹೊದಿಕೆ ತರಬೇಕು. ಉತ್ತರ ಕನ್ನಡ ಜಿಲ್ಲೆಯಿಂದ ಹತ್ತು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಸಕ್ತ ಬಂಧುಗಳು ಆದಷ್ಟು ಬೇಗ ತಮ್ಮ ಜಿಲ್ಲೆಯಿಂದ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಸಂಪರ್ಕ ಮೊಬೈಲ್ ಸಂಖ್ಯೆ : 9448438472
9611650066 (ವಾಟ್ಸಾಪ್) ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ.
*-ಸಂಘಟಕರು,*
*ಶ್ರೀ ನಾರಾಯಣ ಗುರು ಚಿಂತನ ಶಿಬಿರ*
29 May 2022
*ಬಡ ಜನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ, ಅನುಕರಣೀಯ - ಉಮಾನಾಥ ಕೋಟ್ಯಾನ್.
*ಬಡ ಜನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ, ಅನುಕರಣೀಯ - ಉಮಾನಾಥ ಕೋಟ್ಯಾನ್.(ಶಾಸಕರು, ಮುಲ್ಕಿ,ಮೂಡಬಿದರೆ)*
#####################
ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.) ಉಳ್ಳಾಲ ಇದರ 20 ನೆ ವರುಷದ ಶೈಕ್ಷಣಿಕ ದತ್ತುಸ್ವೀಕಾರ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೇದಿಕೆಯ ಮೂಲಕ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 36 ಮಂದಿ ಅರ್ಹ ಫಲಾನುಭವಿ ಮಕ್ಕಳನ್ನು ಶೈಕ್ಷಣಿಕ ದತ್ತು ಸ್ವೀಕರಿಸಿ, ಶಾಲಾ ಬ್ಯಾಗ್, ಪುಸ್ತಕ, ಸ್ಟೇಶನರಿ,ಕೊಡೆ ಮತ್ತು ಶಾಲಾ ಶುಲ್ಕ ವಿತರಿಸಲಾಯಿತು.
2021 - 22 ನೆ ಸಾಲಿನಲ್ಲಿ S.S.L.C. ಪರೀಕ್ಷೆಯಲ್ಲಿ 90% ಮೇಲ್ಪಟ್ಟು ಅಂಕ ಪಡೆದ 15 ಮಕ್ಕಳನ್ನು ಅಭಿನಂದಿಸಲಾಯಿತು. ಪಿ.ಯು.ಸಿ., ಡಿಗ್ರಿಯ 13 ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು. 150 ಮಕ್ಕಳಿಗೆ ಉಚಿತ ಪುಸ್ತಕ ಕೊಡಲಾಯಿತು.
ಈ ಸಂಧರ್ಭದಲ್ಲಿ ಮಂಗಳೂರಿನ ಹೊಟೇಲ್ ದೀಪಾ ಕಂಫರ್ಟ್ ನ ಆಡಳಿತ ನಿರ್ದೇಶಕಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನಗೈದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರಿಗೆ ಬ್ರಹ್ಮಶ್ರೀ ಸೇವಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಶೈಕ್ಷಣಿಕ ದತ್ತುಗೆ ಕುದ್ರೋಳಿ ಶ್ರೀ ಗೋಕರ್ಣಾನಾಥೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸಾಯಿರಾಮ್ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥರಾದ ಡಾ.ಸದಾನಂದ ಪೂಜಾರಿ ಭಾಗವಹಿಸಿದ್ದರು.
ವೇದಿಕೆಯ ಗೌರವ ಸಲಹೆಗಾರರು, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡ್ ಇದರ ಆಡಳಿತ ಮೋಕ್ತೇಸರರಾದ ಎ.ಜೆ.ಶೇಖರ್, ಶ್ರೀ ಮಲರಾಯ ದೂಮಾವತಿ ಭಂಡಾರಮನೆ ಟ್ರಸ್ಟ್, ಬೆಳರಿಂಗೆ ಇದರ ಆಡಳಿತ ಮೋಕ್ತೇಸರರಾದ ಬಾಬು ಶ್ರೀಶಾಸ್ತ ಕಿನ್ಯಾ, ಸಾಯಿಬಾಬ ಮಂದಿರ ಮಾಡೂರು ಇದರ ಆಡಳಿತ ಮೋಕ್ತೇಸರರಾದ ಕೆ.ಪಿ.ಸುರೇಶ್, ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಟ್ರಸ್ಟೀಗಳಾದ ಚಂದ್ರಶೇಖರ ಉಚ್ವಿಲ, ಬಿ.ಜೆ.ಪಿ. ಮಂಗಳೂರು ಮಂಡಲದ ಅಧ್ಯಕ್ಷರಾದ ಚಂದ್ರಹಾಸ ಪಂಡಿತ್ ಹೌಸ್, ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಮೋಕ್ತೇಸರರಾದ ದಿನೇಶ್ ಕೆ.ಅತ್ತಾವರ, ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷರಾದ ಕೆ. ಟಿ.ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಧ್ಯಕ್ಷರಾದ ಸತೀಶ್ ಕರ್ಕೆರ ದತ್ತು ಮಕ್ಕಳ ಪಟ್ಟಿ ಓದಿದರು, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು ಸ್ವಾಗತಿಸಿದರು, ಉಪಾಧ್ಯಕ್ಷರಾದ ಹರೀಶ್ ಮುಂಡೋಳಿ ಅಭಿನಂದನಾ ಪತ್ರ
ವಾಚಿಸಿದರು. ದತ್ತು ಸಂಚಾಲಕ ಆನಂದ ಕೆ.ಅಸೈಗೋಳಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ವಾನ್ ಪ್ರಮೋದ್ ಉಳ್ಳಾಲ ರವರ ನೃತ್ಯ ಸೌರಭ ನಾಟ್ಯ ತಂಡದ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.
21 May 2022
ಶ್ರೀ ಗೋಕರ್ಣನಾಥ ಕೋ - ಓಪರೇಟಿವ್ ಬ್ಯಾಂಕ್ ಲಿ.,- ಮಿಶನ್ ಸ್ಟ್ರೀಟ್ ಶಾಖೆ ಯನ್ನು - ವಾಮಂಜೂರಿಗೆ ಸ್ಥಳಾಂತರ. ಸಮಾರಂಭ ಕಾರ್ಯಕ್ರಮ ಇಂದು... (22-05-2022).
ಶ್ರೀ ಗೋಕರ್ಣನಾಥ ಕೋ - ಓಪರೇಟಿವ್ ಬ್ಯಾಂಕ್ ಲಿ.,- ಮಿಶನ್ ಸ್ಟ್ರೀಟ್ ಶಾಖೆ ಯನ್ನು - ವಾಮಂಜೂರಿಗೆ ಸ್ಥಳಾಂತರ. ಸಮಾರಂಭ ಕಾರ್ಯಕ್ರಮ ಇಂದು... (22-05-2022).
6 May 2022
3 May 2022
ಶ್ರೀ ಬಸವಣ್ಣ ಯಾರು....!?
ಮಂಗಳೂರು ಲಲಿತ ಕಲಾಮೃತ ವಿಶೇಷ ವರದಿಃ
*889ನೇ ಬಸವ ಜಯಂತಿಯ ಶುಭಾಶಯಗಳೊಂದಿಗೆ*
*ಬಸವಣ್ಣ ಯಾರು....?*
12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ.
*ಬಸವಣ್ಣ ಯಾರು....?*
ನಾಲ್ಕು ಕಾಲಿನ, ಒಂದು ಬಾಲದ, ಎರಡು ಕೋಡಿನ, ಗರ್ಭ ಗುಡಿಯ ಎದುರಿಗೆ ಕೂಡಿಸಿದ ನಂದಿ(ಎತ್ತು) ಅಲ್ಲ; ಸರ್ವ ರಂಗದಲ್ಲಿಯೂ ಸಮಾನತೆಯನ್ನು ತಂದು ಮನುಷತ್ವವನ್ನು ಎತ್ತಿ ಹಿಡಿದ ಮಾನವತಾವಾದಿ.
*ಬಸವಣ್ಣ ಯಾರು....?*
ಶತ ಶತಮಾನಗಳ ಕಾಲ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಸ್ತ್ರೀಕುಲೋದ್ಧಾರಕ.
* ಬಸವಣ್ಣ ಯಾರು....?
ಶತ ಶತಮಾನಗಳ ಕಾಲ ಯಾರನ್ನು ಗೆಲ್ಲಲು ಸಾಧ್ಯವಾಗಿದ್ದಿಲ್ಲವೋ ಅಂತಹ ಶೊಷಣೆಗಾಗಿದ್ದವರ ಮನಸ್ಸು, ಹೃದಯವನ್ನು ಗೆದ್ದು ಅವರನ್ನೂ ತನ್ನಂತೆ ಕಂಡು ಮಾದಾರನ ಮಗ ಎಂದು ಕರೆದುಕೊಂಡ ಸಮತಾವಾದಿ.
*ಬಸವಣ್ಣ ಯಾರು....?*
ಯಜ್ಞ-ಯಾಗ ಹೋಮ-ಹವನ ಮಾಡಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಸುಟ್ಟು, ಮುಗ್ದ ಜೀವಗಳನ್ನು ಆಹುತಿ ಮಾಡಿ, ಗುಡಿ ಗುಂಡಾರಗಳನ್ನು ಕಟ್ಟಿ, ಧಾರ್ಮಿಕ ಶೋಷಣೆ ನಡೆಸುತ್ತಿದ್ದವರ ವಿರುದ್ಧ ಬಂಡೆದ್ದು ಧಾರ್ಮಿಕ ಶೋಷಣೆ ನಿಲ್ಲಿಸಿದ ಬಂಡಾಯಗಾರ.
*ಬಸವಣ್ಣ ಯಾರು....?*
ನಿಮ್ನ ವರ್ಗದವರಿಗೆ ದೇವಸ್ಥಾನಗಳಲ್ಲಿ ಬಿಟ್ಟುಕೊಳ್ಳದಾದಾಗ ದೇವಸ್ಥಾನಗಳಿಗೆ ದಿಕ್ಕಾರ ಹಾಕಿ, ಮಾನವರಿಗೆ ಪ್ರವೇಶವಿಲ್ಲದ ಗುಡಿಯಲ್ಲಿ ದೇವರು ಇರುವುದಿಲ್ಲ ಬದಲಿಗೆ ದೇಹವೇ ದೇಗುಲ ಎಂದು ಸಾರಿ, ಅಂಗದ ಮೇಲೆ ಇಷ್ಟಲಿಂಗವನ್ನು ನೀಡಿ
ನಿಮ್ನ ವರ್ಗದವರನ್ನು ಲಿಂಗಾಯತರನ್ನಾಗಿ ಮಾಡಿ ನೂತನ ಲಿಂಗಾಯತ ಧರ್ಮ ಸ್ಥಾಪಿಸಿದ ಧರ್ಮ ಪ್ರವರ್ತಕ.
*ಬಸವಣ್ಣ ಯಾರು....?*
ಶ್ರೇಷ್ಟ ರಾಜಕೀಯ ಮುತ್ಸದ್ದಿ ಪ್ರಧಾನಿಯಾಗಿ,
ನೂತನ ಅನುಭವ ಮಂಟಪವನ್ನು ಕಟ್ಟಿ ತನ್ಮೂಲಕ ವಿಶ್ವದಲ್ಲಿಯೇ ಮೊದಲ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಪ್ರಜಾಪ್ರಭುತ್ವವಾದಿ.
*ಬಸವಣ್ಣ ಯಾರು....?*
ಕೊಲ್ಲೆನಯ್ಯ ಪ್ರಾಣಿಗಳನ್ನು ಮೆಲ್ಲೆನಯ್ಯ ಬಾಯಿಚ್ಛೆಗೆ ಹೊಲ್ಲೆನಯ್ಯ ಪರಸತಿಯರ ಸಂಗವ ಎಂದು ಹೇಳಿದ ಅಹಿಂಸಾವಾದವನ್ನು ಎತ್ತಿ ಹಿಡಿದು ಸಕಲ ಜೀವಾತ್ಮರಿಗೆ ಲೇಸ ಬಯಸಿದ ನೈತಿಕ ಸತ್ಪಥದ ಸೂತ್ರದಾರಿ.
*ಬಸವಣ್ಣ ಯಾರು....?*
ವಿಶ್ವದಲ್ಲಿ ಮೊದಲ ಸಾರ್ವಜನಿಕ ಶಿಕ್ಷಣವನ್ನು ಜಾರಿಗೆ ತಂದು ಅನುಭವ ಮಂಟಪದಲ್ಲಿ ಕಾರ್ಯಗತಗೊಳಿಸಿ, ಅನಕ್ಷರಸ್ತರನ್ನು ಅಕ್ಷರಸ್ತರನ್ನಾಗಿ ಮಾಡಿದ ಶಿಕ್ಷಣ ಕ್ರಾಂತಿಯ ಹರಿಕಾರ.
*ಬಸವಣ್ಣ ಯಾರು....?*
12 ಸಾವಿರ ಸೂಳೆಯರನ್ನು(ಪಣ್ಯಾಂಗನೆ) ಗರತಿ(ಪುಣ್ಯಾಂಗನೆ)ಯರನ್ನಾಗಿ ಮಾಡಿ ಅವರಿಗೆ ಪುನರ್ ವಿವಾಹವ ಮಾಡಿಸಿ ಅವರಿಂದ ವಚನಗಳನ್ನು ಬರೆಯಿಸಿದ ಕರುಣಾಳು.
*ಬಸವಣ್ಣ ಯಾರು.....?*
ಹೊಲೆಯ ಹಾರುವರಲ್ಲಿ ಮದುವೆಯ ಗೈಯಿಸಿ ಮಾನವ ಮಾನವರ ನಡುವಿನ ಜಾತಿಯ ಅಡ್ಡ ಗೋಡೆ ಹೊಡೆದು ಪುಡಿ ಪುಡಿ ಮಾಡಿ ಸಮತಾ ಧ್ವಜ ಹಾರಸಿದ ಯುಗಪುರುಷ.
*ಬಸವಣ್ಣ ಎಂದರೆ ಯಾರು....?*
ತನು, ಮನ, ಭಾವ, ನೇತ್ರ, ದೃಷ್ಟಿ, ಹಸ್ತ, ಪಾದಗಳನ್ನು ಪರುಷಮಯಗೊಳಿಸಿದ ಮಹಾ ಮಂತ್ರ ಪುರುಷ.
*ಬಸವಣ್ಣ ಎಂದರೆ ಯಾರು....?*
ಬಸವಣ್ಣ ಎಂದರೆ; ನಮ್ಮೊಳಗಿನ ಅರಿವಿನ ಪ್ರಜ್ಞೆ. ಬಸವಣ್ಣ ಎಂದರೆ; ದಣಿವರಿಯದ ಬದುಕು. ಬಸವಣ್ಣ ಎಂದರೆ; ಸಾಮರಸ್ಯ. ಬಸವಣ್ಣ ಎಂದರೆ; ಸಹೋದರತೆ. ಬಸವಣ್ಣ ಎಂದರೆ; ಮಹಾ ಬೆಳಗು. ಬಸವಣ್ಣ ಎಂದರೆ; ಮಹಾ ಬಯಲು. ಬಸವಣ್ಣ ಎಂದರೆ; ಮಡಿ ಮೈಲಿಗೆ ಇಲ್ಲದ ವಾತ್ಸಲ್ಯದ ಮಡಿಲು. ಬಸವಣ್ಣ ಎಂದರೆ; ಸಾವು ಕೇಡಿಲ್ಲದ ಶಾಂತ-ಪ್ರಶಾಂತ-ಸಮಚಿತ್ತ-ಸಮಕಳೆ
ಶರಣು ಶರಣಾರ್ಥಿಗಳು🙏🙏
Subscribe to:
Posts (Atom)